Sunday, 30 October 2011

ಮುಸ್ಲಿಮ್ ಲೀಗ್ ಕಾರ್ಯಕರ್ತ ಹಮೀದ್ ಕೊಲೆ ಪ್ರಕರಣ ಕ್ರೈಂಬ್ರಾಂಚ್‌ಗೆ


ರವಿವಾರ - ಅಕ್ಟೋಬರ್ -30-2011 ಮಂಜೇಶ್ವರ್ ಟೈಮ್ಸ್

ಕಾಸರಗೋಡು,ಅ.29:2010ರ ಜನವರಿ 5ರಂದು ಕ್ಯೊಪಾಡಿ ತೀರದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಪೆರುವಾಡಿನ ಮುಸ್ಲಿಮ್‌ಲೀಗ್ ಕಾರ್ಯಕರ್ತ ಪಿ.ಕೆ.ಹಮೀದ್‌ರ ಕೊಲೆ ಪ್ರಕರಣದ ತನಿಖೆಯನ್ನು ಇದೀಗ ಕ್ರೈಂಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಕೊಲೆಗೆ ಸಂಬಂಧಪಟ್ಟಂತೆ ಪೆರುವಾಡ್‌ನ ಪಿ.ಕೆ.ಉಮರುಲ್ ಫಾರೂಕ್(22) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.ಆದರೆ ತನಿಖೆ ಮತ್ತೆ ಪ್ರಗತಿ ಕಾಣದಿರುವುದರಿಂದ ಕುಟುಂಬಸ್ಥರು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತನಿಖೆಯನ್ನು ಕ್ರೈ ಬ್ರಾಂಚ್‌ಗೆ ಹಸ್ತಾಂತರಿಸುವಂತೆ ಮಂಜೇಶ್ವರ ಶಾಸಕ ಪಿ.ಬಿ. ಅಬ್ದುರ್ರಝಾಕ್‌ಗೆ ತಿಳಿಸಿದ್ದಾರೆ

ಕಾಸರಗೋಡು:ಕಾರ್ಮಿಕರ ಪ್ರತಿಭಟನೆ ಹಿಂದೆಗೆತ


ರವಿವಾರ - ಅಕ್ಟೋಬರ್ -30-2011 ಸ್ಟೀಫನ್ ಕಾಸರಗೋಡು ಮಂಜೇಶ್ವರ್ ಟೈಮ್ಸ್

ಕಾಸರಗೋಡು,ಅ.29:ಕಾಸರಗೋಡು- ಮಂಗಳೂರು ರಸ್ತೆಯ ದುರಸ್ತಿ ಕಾರ್ಯವನ್ನು ಸರಿಪಡಿಸುವಂತೆ ಒತ್ತಾಯಿಸಿ ನ.1ರಂದು ಮೋಟಾರು ಕಾರ್ಮಿಕರು ನಡೆಸಲು ನಿರ್ಧರಿಸಿದ್ದ ವಾಹನ ಮುಷ್ಕರವನ್ನು ರಸ್ತೆ ದುರಸ್ತಿಗೊಳಿಸುವ ಭರವಸೆ ಅಧಿಕಾರಿಗಳಿಂದ ಲಭಿಸಿದ ಹಿನ್ನಲೆಯಲ್ಲಿ ಹಿಂದೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.ನಿನ್ನೆ ಜಿಲ್ಲಾಧಿಕಾರಿ ಕೆ.ಎನ್. ಸತೀಶ್ ನೇತೃತ್ವದಲ್ಲಿ ವಾಹನ ಮಾಲಕರು, ಕಾರ್ಮಿಕ ಸಂಘಟನಾ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಚೆರ್ಕಳ- ಚಟ್ಟಂಚಾಲ್ ರಾಷ್ಟ್ರೀಕೃತ ಹೆದ್ದಾರಿಯಾದ ಚಂದ್ರಗಿರಿ- ಕಾಞಂಗಾಡ್ ರಸ್ತೆ, ಚೆರ್ವತ್ತೂರು- ಞಾಣಂಗೈ ರಸ್ತೆ ಕಾಮಗಾರಿ ನ.15ರೊಳಗೆ ಆರಂಭಿಸಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಟಿ.ಕೆ. ಸೋಮನ್, ಬಾಲಕೃಷ್ಣನ್ ನಂಬಿಯಾರ್, ಗಿರೀಶ್, ನ್ಯಾಯವಾದಿ ಮುರಳೀಧರನ್, ಅಬ್ದುಲ್ ರಹ್ಮಾನ್, ಶ್ರೀಧರನ್, ಹಾರೀಸ್, ವಾಹನ ಮಾಲಕರು, ಕಾರ್ಮಿಕ ಸಂಘಟನಾ ಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಡ್ವಾಣಿಯವರ ಜನ ಚೇತನ ಯಾತ್ರೆ ರಾಜಕೀಯದ ಅಂತಿಮ ಯಾತ್ರೆ: ಹರಿಪ್ರಸಾದ್ ಲೇವಡಿ


ರವಿವಾರ - ಅಕ್ಟೋಬರ್ -30-2011 ಮಂಜೇಶ್ವರ್ ಟೈಮ್ಸ್

ಬೆಂಗಳೂರು, ಅ.30: ರಾಜ್ಯದ ಬಿಜೆಪಿ ನಾಯಕರು ಭ್ರಷ್ಟಾಚಾರವೆಸಗಿ ಜೈಲು ಸೇರುತ್ತಿದ್ದು, ಈ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಎಲ್.ಕೆ.ಅಡ್ವಾಣಿಯವರಿಗೆ ‘ಜನ ಚೇತನ’ ಯಾತ್ರೆ ನಡೆಸಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಇದು ಅಡ್ವಾಣಿಯವರ ರಾಜಕೀಯ ಜೀವನದ ಅಂತಿಮ ಯಾತ್ರೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯ ಬಿಜೆಪಿ ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ತುಂಬಿದೆ. ಬಿಜೆಪಿಯ ಹಲವು ನಾಯಕರು ಈಗಾಗಲೇ ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ಸರಿಯಾದ ಆಡಳಿತ ಕಾರ್ಯ ನಡೆಯುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಅಡ್ವಾಣಿಯವರು ಕೈಗೊಂಡಿರುವ ‘ಜನ ಚೇತನ’ ಯಾತ್ರೆ ಭ್ರಷ್ಟಾಚಾರ ವಿರೋಧಿಸಿಯಲ್ಲ. ಅವರು ಪಕ್ಷದ ಪ್ರಚಾರಕ್ಕಾಗಿ ಈ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದ ಅವರು, ಅಡ್ವಾಣಿಯವರ ಜನ ಚೇತನ ಯಾತ್ರೆ ಈ ವರ್ಷದ ದೊಡ್ಡ ಜೋಕ್ ಎಂದರು.

Saturday, 29 October 2011

എഞ്ചിനിയറിംഗ് വിദ്യാര്‍ത്ഥി ഇന്‍ഡോറില്‍ മുങ്ങിമരിച്ചു

മംജേശ്വരം: എഞ്ചിനീയറിംഗ് വിദ്യാര്‍ത്ഥിയായ ബന്തിയോട് ഹേരൂര്‍ സ്വദേശി ഇന്‍ഡോറില്‍ മുങ്ങി മരിച്ചു. ഹേരൂര്‍ സ്വദേശിയും, സി പി സി ആര്‍ ഐ യില്‍ താമസക്കാരനുമായ യൂസഫ് സഫ്വാന്‍ (18) ആണ് ഇന്‍ഡോറില്‍ കോളേജിനു സമീപത്തുള്ള വെള്ളച്ചാട്ടത്തില്‍ മുങ്ങിമരിച്ചത്. ഇന്നലെ കൂട്ടുകാര്‍ക്കൊപ്പം കുളിക്കാന്‍ പോയ സഫ്വാന്‍ കുളിക്കുന്നതിനിടയില്‍ കാല്‍ തെന്നിവീഴുകയായിരുന്നു. കൂട്ടുകാര്‍ രക്ഷപ്പെടുത്താന്‍ ശ്രമിച്ചെങ്കിലും സാധിച്ചില്ല. ഇന്നുരാവിലെയാണ് മൃതദേഹം കണ്ടെത്തിയത്. ഇന്‍ഡോറില്‍ രണ്ടാം വര്‍ഷ എഞ്ചിനീയറിംഗ് വിദ്യാര്‍ത്ഥിയായ സഫ്വാന്‍ സി പി സി ആര്‍ ഐ യില്‍ ജീവനക്കാരനായിരുന്ന മൂസയുടെയും, ബീഫാത്തിമയുടെയും മകനാണ്. സഹോദരങ്ങള്‍ : റിസ്വാന്‍, തഹ്‌സിയ.