Sunday, 30 October 2011

ಅಡ್ವಾಣಿಯವರ ಜನ ಚೇತನ ಯಾತ್ರೆ ರಾಜಕೀಯದ ಅಂತಿಮ ಯಾತ್ರೆ: ಹರಿಪ್ರಸಾದ್ ಲೇವಡಿ


ರವಿವಾರ - ಅಕ್ಟೋಬರ್ -30-2011 ಮಂಜೇಶ್ವರ್ ಟೈಮ್ಸ್

ಬೆಂಗಳೂರು, ಅ.30: ರಾಜ್ಯದ ಬಿಜೆಪಿ ನಾಯಕರು ಭ್ರಷ್ಟಾಚಾರವೆಸಗಿ ಜೈಲು ಸೇರುತ್ತಿದ್ದು, ಈ ಸಂದರ್ಭದಲ್ಲಿ ಭ್ರಷ್ಟಾಚಾರದ ವಿರುದ್ಧ ಎಲ್.ಕೆ.ಅಡ್ವಾಣಿಯವರಿಗೆ ‘ಜನ ಚೇತನ’ ಯಾತ್ರೆ ನಡೆಸಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಇದು ಅಡ್ವಾಣಿಯವರ ರಾಜಕೀಯ ಜೀವನದ ಅಂತಿಮ ಯಾತ್ರೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯ ಬಿಜೆಪಿ ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ತುಂಬಿದೆ. ಬಿಜೆಪಿಯ ಹಲವು ನಾಯಕರು ಈಗಾಗಲೇ ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ಸರಿಯಾದ ಆಡಳಿತ ಕಾರ್ಯ ನಡೆಯುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಅಡ್ವಾಣಿಯವರು ಕೈಗೊಂಡಿರುವ ‘ಜನ ಚೇತನ’ ಯಾತ್ರೆ ಭ್ರಷ್ಟಾಚಾರ ವಿರೋಧಿಸಿಯಲ್ಲ. ಅವರು ಪಕ್ಷದ ಪ್ರಚಾರಕ್ಕಾಗಿ ಈ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದ ಅವರು, ಅಡ್ವಾಣಿಯವರ ಜನ ಚೇತನ ಯಾತ್ರೆ ಈ ವರ್ಷದ ದೊಡ್ಡ ಜೋಕ್ ಎಂದರು.

No comments:

Post a Comment