Sunday, 30 October 2011

ಕಾಸರಗೋಡು:ಕಾರ್ಮಿಕರ ಪ್ರತಿಭಟನೆ ಹಿಂದೆಗೆತ


ರವಿವಾರ - ಅಕ್ಟೋಬರ್ -30-2011 ಸ್ಟೀಫನ್ ಕಾಸರಗೋಡು ಮಂಜೇಶ್ವರ್ ಟೈಮ್ಸ್

ಕಾಸರಗೋಡು,ಅ.29:ಕಾಸರಗೋಡು- ಮಂಗಳೂರು ರಸ್ತೆಯ ದುರಸ್ತಿ ಕಾರ್ಯವನ್ನು ಸರಿಪಡಿಸುವಂತೆ ಒತ್ತಾಯಿಸಿ ನ.1ರಂದು ಮೋಟಾರು ಕಾರ್ಮಿಕರು ನಡೆಸಲು ನಿರ್ಧರಿಸಿದ್ದ ವಾಹನ ಮುಷ್ಕರವನ್ನು ರಸ್ತೆ ದುರಸ್ತಿಗೊಳಿಸುವ ಭರವಸೆ ಅಧಿಕಾರಿಗಳಿಂದ ಲಭಿಸಿದ ಹಿನ್ನಲೆಯಲ್ಲಿ ಹಿಂದೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.ನಿನ್ನೆ ಜಿಲ್ಲಾಧಿಕಾರಿ ಕೆ.ಎನ್. ಸತೀಶ್ ನೇತೃತ್ವದಲ್ಲಿ ವಾಹನ ಮಾಲಕರು, ಕಾರ್ಮಿಕ ಸಂಘಟನಾ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಚೆರ್ಕಳ- ಚಟ್ಟಂಚಾಲ್ ರಾಷ್ಟ್ರೀಕೃತ ಹೆದ್ದಾರಿಯಾದ ಚಂದ್ರಗಿರಿ- ಕಾಞಂಗಾಡ್ ರಸ್ತೆ, ಚೆರ್ವತ್ತೂರು- ಞಾಣಂಗೈ ರಸ್ತೆ ಕಾಮಗಾರಿ ನ.15ರೊಳಗೆ ಆರಂಭಿಸಲಾಗುವುದೆಂದು ಅಧಿಕಾರಿಗಳು ಭರವಸೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಟಿ.ಕೆ. ಸೋಮನ್, ಬಾಲಕೃಷ್ಣನ್ ನಂಬಿಯಾರ್, ಗಿರೀಶ್, ನ್ಯಾಯವಾದಿ ಮುರಳೀಧರನ್, ಅಬ್ದುಲ್ ರಹ್ಮಾನ್, ಶ್ರೀಧರನ್, ಹಾರೀಸ್, ವಾಹನ ಮಾಲಕರು, ಕಾರ್ಮಿಕ ಸಂಘಟನಾ ಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಅಧಿಕಾರಿಗಳು ಪಾಲ್ಗೊಂಡಿದ್ದರು.

No comments:

Post a Comment